1-06-2012ರಂದು ಗ್ರಾಮ ವಿಕಾಸ ಪ್ರತಿಷ್ಠಾನ (ರಿ) ಹಂದಟ್ಟು-ಕೋಟ ಸಂಸ್ಥೆಯವರು ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ ನೋಟ್ ಬುಕ್ಸ್ನ್ನು ವಿತರಿಸಲಾಯಿತು.

ಕಳೆದ 15 ವರ್ಷದಿಂದ ಈ ಸಂಸ್ಥೆಯು ಸಮಾಜದ ಏಳಿಗೆಗಾಗಿ, ಚಟುವಟಿಕೆಗಾಗಿ ದುಡಿಯುತ್ತಿದೆ. ಕಳೆದ 11 ವರ್ಷದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ಸ್ನ್ನು ವಿತರಿಸುತ್ತಿದೆ. ಕೋಟ ಪಡುಕರೆಯ ಪ್ರಥಮದರ್ಜೆಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಸಂತರಾಜ್ ಶೆಟ್ಟಿ ಕೆ.ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ನೋಟ್ಬುಕ್ಸ್ನ್ನು ನೀಡುತ್ತಿರುವುದು. ಹಾಗೆ ಗ್ರಾಮ ವಿಕಾಸ ಪ್ರತಿಷ್ಠಾನದ ಚೇರ್ಮ್ಯಾನ್ ಶ್ರೀಯುತ ಮಂಜುನಾಥ ಎಸ್.ಕೆ, ಸಾಪ್ಟ್ ಪ್ರೊ ಬ್ಯುಸಸೆಸ್ ಸೆಲ್ಯುಶನ್ ಮಾಲಿಕರಾದ ಶ್ರೀಯುತ ರವಿರಾಜ್, ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಶ್ರೀಯುತ ಜನಾರ್ಧನ ಆಚಾರ್. ಅದ್ಯಾಪಕ ಸಂತೋಷರವರು ಮತ್ತು ಮುಖ್ಯೋಪಾಧ್ಯಾಯನಿ ಶ್ರೀಮತಿ ಸಂಪ ರವರು ವೇದಿಕೆಯಲ್ಲಿದ್ದರು