ಬ್ರಹ್ಮಾವರ: ನಳನಳಿಸುತ್ತಿರುವ ಸಸ್ಯಕ್ಷೇತ್ರ; ಜಿಲ್ಲಾದಿಕಾರಿ ಭೇಟಿ brahmavara.com/admin
ಬ್ರಹ್ಮಾವರ ಸಮೀಪದ ದೂಪದಕಟ್ಟೆಯಲ್ಲಿರುವ ಅರಣ್ಯ ಇಲಾಖೆಯ ಸಸ್ಯಕ್ಷೇತ್ರಕ್ಕೆ ಉಡುಪಿ ಜಿಲ್ಲಾದಿಕಾರಿ ಡಾ. ಎಂ.ಟಿ. ರೇಜು ಹಾಗೂ ಇಲಾಖೆಯ ಅದಿಕಾರಿಗಳು ಶುಕ್ರವಾರ ವೀಕ್ಷಣೆಗಾಗಿ ಭೇಟಿ ನೀಡಿದರು.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸಸ್ಯಗಳನ್ನು ವೀಕ್ಷಿಸಿದರು. ಕೃಷಿ ಪ್ರೋತ್ಸಾಹ ಯೋಜನೆ, ನಡುತೋಪು ರಚನೆ, ಸಾರ್ವಜನಿಕ ವಿತರಣೆಗಾಗಿ ಸುಮಾರು ೫೦ ಜಾತಿ ಸಸ್ಯಗಳನ್ನು ಬೆಳೆಸಲಾಗಿದೆ. ಕಡುಬೇಸಗೆಯಲ್ಲೂ ಉತ್ತಮವಾಗಿ ಸಂರಕ್ಷಿಸಿ ಬೆಳೆಸಿದ ೨ ಲಕ್ಷ ಸಸಿಗಳು ವಿತರಣೆಗೆ ಸಿದ್ಧಗೊಂಡಿದೆ. ಇವುಗಳಲ್ಲಿ ಅನೇಕ ಅಪರೂಪದ ಜಾತಿಯ ಸಸ್ಯಗಳೂ ಸೇರಿವೆ.