ಬ್ರಹ್ಮಾವರ ನಿರ್ಮಲ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವದ ಸವಿನೆನಪಿಗಾಗಿ ದಾನಿಗಳ ಸಹಕಾರದಿಂದ ಕೊಡಮಾಡಿದ ನೋಟ್ ಪುಸ್ತಕ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮವು ಸಂಚಾಲಕರಾದ ವಂ.ಫಾ. ಅಂತೋನಿ ವಾಸ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.



ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಯಶವಂತ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಬ್ರಹ್ಮಾವರ ವಲಯದ ಸಮನ್ವಯ ಅದಿಕಾರಿ ಎ.ಆರ್. ವಿಶ್ವಾಸ್ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸರಕಾರದ ವಿವಿಧ ಯೋಜನೆಗಳ ಕುರಿತು ತಿಳಿಸಿದರು. ವಾರಂಬಳ್ಳಿ ಪಂಚಾಯತ್ ಅಧ್ಯಕ್ಷ ಎಸ್. ನಾರಾಯಣ್, ಕಸ್ತೂರಿ ವಿ. ಶೆಟ್ಟಿ ವಿಜಯಾ ಬ್ಯಾಂಕ್ ಬ್ರಹ್ಮಾವರ, ಸುದೇಶ್ ಶೆಟ್ಟಿ, ರತ್ನಾಕರ ಶೆಟ್ಟಿ ಹಾಗೂ ದಾನಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯೆ ಸಿ. ಮೇರಿ ಮೊನಿಕಾ ರೊಡ್ರಿಗಸ್ ಉಪಸ್ಥಿತರಿದ್ದರು. ಶಿಕ್ಷಕಿ ಡೋರತಿ ಸ್ವಾಗತಿಸಿ, ಫಿಲೋಮಿನಾ ಬರೆಟ್ಟೊ ವಂದಿಸಿದರು. ಫಿಲೋಮಿನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.