05.06.2012 ರಂದು ವಿಶ್ವಪರಿಸರ ದಿನಾಚರಣೆಯನ್ನು ಶಾಲಾ ಇಕೋಕ್ಲಬ್ ವತಿಯಿಂದಆಚರಿಸಲಾಯಿತು.ಶಾಲಾ ಆವರಣದಿಂದ ಸ್ಥಳೀಯ ಗುಡ್ಡೆಯಂಗಡಿಯವರೆಗೆ ಪರಿಸರಜಾಗೃತಿಜಾಥಾ ಹಮ್ಮಿಕೊಳ್ಳಲಾಗಿತ್ತು.ಈ ಜಾಥಕ್ಕೆ ಶಾಲಾ ಮುಖ್ಯೋಪಾದ್ಯಾಯರಾದ ಶ್ರೀ ಪ್ರವೀಣ್ಕುಮಾರ್ ಶೆಟ್ಟಿ ಚಾಲನೆ ನೀಡಿದರು.

ಪರಿಸರ ಸಂರಕ್ಷಣೆ, ಅಂತರ್ಜಲ ಹೆಚ್ಚಳ, ಪರಿಸರ ಸ್ವಚ್ಛತೆ, ಕಾಡಿನ ಸಂರಕ್ಷಣೆ, ನೀರಿನ ಮಿತವ್ಯಯ ಬಳಕೆಯ ಕುರಿತಂತೆ ಅನೇಕ ಘೋಷಣೆಗಳು ರಸ್ತೆಯುದ್ದಕ್ಕೂ ಮೊಳಗಿದವು.ಜಾಥವುಗುಡ್ಡೆಯಂಗಡಿಗೆ ತೆರೆಳಿ ಅಲ್ಲಿನ ಸ್ಥಳೀಯ ಸಮುದಾಯದ ನಡುವೆ ಬೀದಿ ನಾಟಕ ವನ್ನು ಪ್ರದರ್ಶಿಸಲಾಯಿತು.10 ನೇ ತರಗತಿಯಅಭಿಷೇಕ ನೇತೃತ್ವದಲ್ಲಿ ಶಾಲೆಯ ಮಕ್ಕಳು ಶುದ್ಧಕುಡಿಯುವ ನೀರಿನ ಬಳಕೆ, ನೈರ್ಮಲೀಕರಣಕ್ಕೆ ಸಂಬಂದಿಸಿದಂತೆ ಬೀದಿನಾಟಕವನ್ನು ಪ್ರಸ್ತುತಪಡಿಸಿದರು..ಬೀದಿನಾಟಕಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೃಷ್ಣಯ್ಯ ಶೆಟ್ಟಿಕಾರ್ಯಕ್ರಮಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಜಾಥಾದಲ್ಲಿ ಮುಖ್ಯೋಪಾದ್ಯಾಯರಾದ ಶ್ರೀ ಪ್ರವೀಣ್ಕುಮಾರ್ ಶೆಟ್ಟಿ, ಇಕೋಕ್ಲಬ್ ಸಂಘಟಕರಾದದೊಡ್ಡಆರಸು, ದೈಹಿಕ ಶಿಕ್ಷಕರಾದ ಸಂತೋಷ್ತಿಗಡ್, ಕನ್ನಡ ಭಾಷಾ ಶಿಕ್ಷಕರಾಗ ಪುರುಷೋತ್ತಮಗಣಿತ ಶಿಕ್ಷಕಿ ಶ್ರೀಮತಿ ಶುಭಶ್ರೀ ಬಲ್ಲಾಳ್ ಭಾಗವಹಿಸಿದರು.