ಬ್ರಹ್ಮಶ್ರೀ ಬಿಲ್ಲವ ಬಳಗ ಬ್ರಹ್ಮಾವರದ ವತಿಯಿಂದ ಬಿಲ್ಲವ ಸಮಾವೇಶ ಮತ್ತು ಬಿಲ್ಲವ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಬ್ರಹ್ಮಾವರ ಆಕಾಶವಾಣಿ ಸಮೀಪದ ನಾರಾಯಣ ಗುರು ಸಭಾ ಭವನದಲ್ಲಿ ಜರಗಿತು.
ಸಮಾರಂಭದಲ್ಲಿ ವಿಶ್ವ ಚಾಂಪಿಯನ್ ಕಬಡ್ಡಿ ತಂಡದ ನಾಯಕಿ ಮಮತ ಪೂಜಾರಿ, ಉಡುಪಿ ಸ್ಮಶಾನ ಕಾವಲುಗಾರ್ತಿ ವನಜ ಪೂಜಾರಿ, ಗಿನ್ನೆಸ್ ದಾಖಲಿಸಿದ ಸಂಜಯ್ ದಯಾನಂದ ಕಾಡೂರು ಅವರನ್ನು ಗೌರವಿಸಲಾಯಿತು. ಸ್ವಾಮಿವರ್ಯರು, ಸಮಾಜದ ಗಣ್ಯರು ಉಪಸ್ಥಿತರಿದ್ದರು.