ದುಬೈ:ಅತಿ ದೊಡ್ಡ ತಾಂತ್ರಿಕ ಪಟ್ಟಣವೆಂದೇ ಖ್ಯಾತಿ ಗಳಿಸಿರುವ ದುಬೈ ಇಂಟರ್ ನೆಟ್ ಸಿಟಿಯಲ್ಲಿ ಪ್ಹೆಸ್ಬುಕ್ಕು ತನ್ನ ಪ್ರಥಮ ಜಾಗತಿಕ ಕಛೇರಿಯನ್ನು ತೆರೆಯಿತು.
ಮಿಡ್ಲ್ ಈಸ್ಟ್ ಅಂಡ್ ನಾರ್ತ್ ಆಫ್ರಿಕಾ (ಮೇನ)ರಾಷ್ಟ್ರಗಳನ್ನು ಈ ಕಚೇರಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ಹೆಸ್ಭುಕ್ಕ್ ಜೊನಾಥನ್ ಲೆಬೇನ್ ಅವರ ನೆತೃತ್ವದಲ್ಲಿ ನಿಯಂತ್ರಿಸಲಿದೆ.
ಕೊಲ್ಲಿ ರಾಷ್ಟ್ರದಲ್ಲಿ ಅತಿ ಹೆಚ್ಚು ಪ್ಹೆಸ್ಬುಕ್ಕು ಮತ್ತು ಟ್ವಿಟ್ಟರ್ ಬಳಕೆದಾರರು ಇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರವನ್ನು ವೃದ್ಧಿಸಲು ಕಂಪೆನಿಗಳು ಪ್ಹೆಸ್ಬುಕ್ಕು ಅನ್ನು ಅವಲಂಭಿಸಿದೆ.
ಈ ನಿಟ್ಟಿನಲ್ಲಿ ಈ ಕಚೇರಿ ಅವರ ಸಹಾಯಕ್ಕೆ ಬರಲಿದೆ. ಮತ್ತು ಉತ್ಪನ್ನ ಜಾಹಿರಾತನ್ನು ವಿಶಿಷ್ಟ ರೀತಿಯಲ್ಲಿ ಪ್ಹೆಸ್ಬುಕ್ಕ್ ಬಳಕೆದಾರರಿಗೆ ಸಂವಹಿನಿಸುವ ಕಾರ್ಯತಂತ್ರವನ್ನು ಈ ಕಚೇರಿ ಕೈಗೊಳ್ಳಲಿದೆ ಎಂದು ಜೊನಾಥನ್ ಮಾಹಿತಿ ನೀಡಿದ್ದಾರೆ.