2012 ಜೂನ್ 8ನೇ ತಾರೀಕು ಶುಕ್ರವಾರ ಸಂಜೆ 6.30ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ -(ಇಂಡಿಯನ್ ಹೈಸ್ಕೂಲ್ ದುಬಾಯಿ)ಭವ್ಯ ರಂಗ ಮಂಟಪದಲ್ಲಿ ಯಕ್ಷಮಿತ್ರರು ದುಬಾಯಿ ಯು. ಎ. ಇ.ಯ ಸ್ಥಳಿಯ ಕಲಾವಿದರು ತಮ್ಮ ಅಭಿನಯ ಚಾತುರ್ಯದಿಂದ "ತ್ರಿಜನ್ಮ ಮೋಕ್ಷ"ಯಕ್ಷಗಾನ ಅದ್ಭುತ ರಮ್ಯಲೋಕವನ್ನು ಸೃಷ್ಟಿಸಿ ಐತಿಹಾಸಿಕ ದಾಖಲೆಯನ್ನಾಗಿಸಿದರು.
ಶ್ರೀ ವಾಸುದೇವ್ ಭಟ್ ರವರ ಪೌರೋಹಿತ್ಯದಲ್ಲಿ ರಂಗಪೂಜೆ ನಡೆದು ನಂತರ ಶ್ರೀ ಸರ್ವೋತ್ತಮ ಶೆಟ್ಟಿಯವರು ಯಕ್ಷಗಾನ ಶೈಲಿಯಲ್ಲಿ ಕಾರ್ಯಕ್ರಮ ಪ್ರಾರಂಭಿಸಿದರು.


ಶ್ರೀ ಶೇಖರ್ ಶೆಟ್ಟಿಯವರು ಜ್ಯೋತಿಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವೇದಿಕೆಯಲ್ಲಿ ಶ್ರೀಯುತರುಳಾದ ಹರೀಶ್ ಶೇರಿಗಾರ್,ಪ್ರವೀಣ್ ಶೆಟ್ಟಿ,ಗಿರೀಶ್ ಶೆಟ್ಟಿ, ಸತೀಶ್ ಪೂಜಾರಿ,ಸಿ. ಆರ್. ಶೆಟ್ಟಿ ಮತ್ತು ಯಕ್ಷಮಿತ್ರರು ತಂಡದ ಸದಸ್ಯರು ಉಪಸ್ಥಿತರಿದ್ದರು.
ಕೊಲ್ಲಿ ನಾಡಿನ ಯಕ್ಷಗಾನ ಪ್ರಿಯರ ಮನಗೆದ್ದ ಸುಮಧುರ ಕಂಠಸಿರಿಯ ಭಾಗವತರು ಶ್ರೀ ಪಟ್ಲ ಸತೀಶ್ ಶೆಟ್ಟಿ
ಶ್ರೀ ಕಟೀಲು ಮೇಳದ ಪ್ರಸಿದ್ದ ಭಾಗವತರಾದ ಮಧುರ ಕಂಠದ ಶ್ರೀ ಪಟ್ಲ ಸತೀಶ್ ಶೆಟ್ಟಿ ಯವರು ದ್ವಿತೀಯ ಬಾರಿಗೆ ದುಬಾಯಿಗೆ ಆಗಮಿಸಿ ತಮ್ಮ ಕಂಠಸಿರಿಯಿಂದ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರಿಯರ ಮನಗೆದ್ದು ಸರ್ವರ ಪ್ರಶಂಸೆಗೆ ಪಾತ್ರರಾದರು.
ಪ್ರಖ್ಯಾತ ಚೆಂಡೆ ವಾದಕರಾದ ದೆಲಂತಮಜಲು ಸುಬ್ರಹ್ಮಣ್ಯ ಭಟ್ ರವರಿಗೆ "ಯಕ್ಷಗಾನ ಕಲಾ ಪ್ರವೀಣ" ಬಿರುದು ನೀಡಿ ಗೌರವ ಸಲ್ಲಿಕೆ

ಪ್ರಖ್ಯಾತ ಚೆಂಡೆ ವಾದಕರಾದ ದೆಲಂತಮಜಲು ಸುಬ್ರಹ್ಮಣ್ಯ ಭಟ್ ರವರು ಶ್ರೀ ನೆಡ್ಲೆ ನರಸಿಂಹ ಭಟ್ ರವರ ಶಿಷ್ಯರಾಗಿದ್ದು, ಕದ್ರಿ ಮೇಳ,ಕರ್ನಾಟಕ, ಮಂಗಳಾದೇವಿ ಮೇಳಗಳಲ್ಲಿ ೨೨ ವರ್ಷಗಳ ಸೇವೆಸಲ್ಲಿಸಿ,ಪ್ರಸ್ತುತ ಎಡನೀರು ಮೇಳದಲ್ಲಿ ಕಳೆದ ಐದು ವರ್ಷಗಳಿಂದ ಚೆಂಡೆವಾದಕರಾಗಿದ್ದಾರೆ.

ಪ್ರಥಮ ಬಾರಿಗೆ ದುಬಾಯಿಗೆ ಆಗಮಿಸಿ ತಮ್ಮ ಹಸ್ಥಕೌಶಲ್ಯದ ಮೂಲಕ ಕೊಲ್ಲಿ ನಾಡಿನ ದಿಕ್ಕು ದಿಕ್ಕಿಗೆ ತಮ್ಮ ಚೆಂಡೆಯನಾದವನ್ನು ಪ್ರತಿಧ್ವನಿಸಿದ್ದಾರೆ.ಹಿರಿಯ ಕಲಾವಿದರಾದ ಇವರನ್ನು ಯಕ್ಷಮಿತ್ರರು, ಗಣ್ಯರು ಮತ್ತು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ "ಯಕ್ಷಗಾನ ಕಲಾ ಪ್ರವೀಣ" ಬಿರುದು ನೀಡಿ ಗೌರವಿಸಿದರು.
ಬಹುಮುಖ ಪ್ರತಿಭೆಯ ಕಲಾವಿದರಾದ ಡೊನಾಲ್ಡ್ ಕೊರೆಯಾ ಮತ್ತು ಆಶಾ ಕೊರೆಯಾ ದಂಪತಿಗಳಿಗೆ ಸನ್ಮಾನ

ದಂಪತಿಗಳಾದ ಶ್ರೀ ಡೊನಾಲ್ಡ್ ಕೊರೆಯಾ ಮತ್ತು ಶ್ರೀಮತಿ ಆಶಾ ಕೊರೆಯಾ ರವರು ಮಧುರ ಕಂಠದ ಗಾಯಕರು, ನಟರು, ಕಾರ್ಯಕ್ರಮ ನಿರೂಪಕರಾಗಿರುವ ಇವರು ತುಳು, ಕೊಂಕಣಿ, ಕನ್ನಡ ಭಾಷೆಯಲ್ಲಿ ಹಲವಾರು ಕಾರ್ಯಕ್ರಮ ನೀಡಿ ಜನಪ್ರಿಯತೆಯನ್ನು ಪಡೆದ ಕಲಾವಿದರು.

ಗಲ್ಫ್ ವಾಯ್ಸ್ ಆಫ್ ಮ್ಯಾಂಗಲೂರ್ ಸ್ಪರ್ಧೆಯಲ್ಲಿ ಗಲ್ಫ್ ನಾಡಿನ ಮಟ್ಟದಲ್ಲಿ ಪ್ರಥಮ,ದ್ವಿತೀಯಾ ಬಹುಮಾನ ಪಡೆದು,ದುಬಾಯಿಯಲ್ಲಿ ರಂಗಪ್ರಯೋಗದಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.ಯಕ್ಷಗಾನ ಕಲೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ತಮ್ಮ ಕಲಾಸೇವೆಯನ್ನು ಸಲ್ಲಿಸುತ್ತಿರುವ ಬಹುಮುಖ ಪ್ರತಿಭೆಯ ಕಲಾವಿದರಾದ ಡೊನಾಲ್ಡ್ ಕೊರೆಯಾ ಮತ್ತು ಆಶಾ ಕೊರೆಯಾ ದಂಪತಿಗಳನ್ನು ಯಕ್ಷಮಿತ್ರರು,ಗಣ್ಯರು ಮತ್ತು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.
ಕಲಾಪ್ರೌಡಿಮೆಯನ್ನು ಸಾಕ್ಷೀಕರಿಸಿದ ಯಕ್ಷಮಿತ್ರರ ಕಲಾ ತಂಡ

ದುಬಾಯಿಯಲ್ಲಿ ವಿವಿಧ ಹುದ್ದೆಯಲ್ಲಿ ಅವಿಶ್ರಾಂತ ದುಡಿತದ ನಡುವೆ ತಮಗೆ ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಕಲಾಸೇವೆಗೆ ಮುಡಿಪಾಗಿಟ್ಟು ಕಳೆದ ಹಲವು ವರ್ಷಗಳಿಂದ ಯು.ಎ.ಇ. ಯಕ್ಷಗಾನ ಅಭಿಮಾನಿಗಳಿಗೆ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಯಕ್ಷಮಿತ್ರರ ಕಲಾ ತಂಡ ಹಲವಾರು ತಿಂಗಳಿನಿಂದ ತಾಲಿಮು ನಡೆಸಿ ಪರಿಪಕ್ವತೆಯನ್ನು ಮೈಗೂಡಿಸಿಕೊಂಡಿದ್ದಾರೆ. ದುಬಾಯಿಯಲ್ಲಿ ಪ್ರಥಮ ಬಾರಿಗೆ ಒಂದು ಸಾವಿರದ ಐನೂರು ಮಂದಿ ಕುಳಿತು ವೀಕ್ಷಿಸುವ ಭವ್ಯ ಸುಸಜ್ಜಿತ ರಂಗಮಂದಿರದಲ್ಲಿ ಯಕ್ಷಮಿತ್ರರ ಕಲಾ ತಂಡ ತಮ್ಮ ಅಭಿನಯ ಚಾತುರ್ಯವನ್ನು ಬಹುನಿರೀಕ್ಷಿತ ಅಭಿಮಾನಿಗಳ ಮುಂದೆ ಸಾಕ್ಷೀಕರಿದರು.
ಅತಿಥಿ ಕಲಾವಿದರಾಗಿ ಆಗಮಿಸಿದ ಗಂಗಾಧರ್ ಶೆಟ್ಟಿಗಾರ್,ಬನಾರಿ ಚಂದ್ರಶೇಖರ ಗೌಡ ಅನುಭವೀ ಕಲಾವಿದರ ಸಾಥ್
ಕೊಲ್ಲಿನಾಡಿನ ಕಲಾವಿದರಿಗೆ ಊರಿನಿಂದ ಅತಿಥಿ ಕಲಾವಿದರಾಗಿ ಆಗಮಿಸಿದ ಗಂಗಾಧರ್ ಶೆಟ್ಟಿಗಾರ್,ಬನಾರಿ ಚಂದ್ರಶೇಖರ ಗೌಡ ಅನುಭವೀ ಕಲಾವಿದರು ಸಾಥ್ ನೀಡಿ ಯಶಸ್ಸಿನಲ್ಲಿ ಭಾಗಿಗಳಾದರು.ಶ್ರೀಮತಿ ಆಶಾ ಕೊರೆಯಾ,ಸೌಮ್ಯ ಧನಂಜಯ,ಕು. ಶರಣ್ಯ ವೆಂಕಟೇಶ್ ಶಾಸ್ತ್ರಿ, ಶ್ರೀಯುತರುಗಳಾದ,ಭವಾನಿ ಶಂಕರ್ ಶರ್ಮಾ,ಬಾಲಕೃಷ್ಣ ಶೆಟ್ಟಿಗಾರ್,ಡೋನಿ ಕೊರೆಯಾ, ಹರೀಶ್ ಎಂ.ಎಸ್.ಕಿಶೋರ್ ಗಟ್ಟಿ,ಕೃಷ್ಣರಾಜ ರಾವ್,ಕೃಷ್ಣ ಕುಮಾರ್ ಐಲ್, ಪ್ರಭಾಕರ್ ಸುವರ್ಣ, ರವಿ ಉಚ್ಚಿಲ್,ಶೇಖರ್ ಉಪ್ಪಿನಂಗಡಿ, ಶೇಖರ್ ಡಿ ಶೆಟ್ಟಿಗಾರ್,ಸುಬ್ರಹ್ಮಣ್ಯ ಕಾರ್ಕಳ, ಸುಧಾಕರ್ ತುಂಬೆ,ವಸಂತ್ ಶೆರ್ವೆಗಾರ್,ವಾಸು ಬಾಯರ್,ವಿಕ್ರಮ್ ಶೆಟ್ಟಿ,ಲೋಕೇಶ್ ಪೂಜಾರಿ, ಧನುಂಜಯ, ಲೋಕೆಶ್, ವಿಶ್ವನಾಥ್ ಶೆಟ್ಟಿ,ಗಿರೀಶ್ ಕಾಟಿಪಳ್ಳ ಮತ್ತು ಚಿದಾನಂದ ಪೂಜಾರಿ.
ಹಿಮ್ಮೇಳದಲ್ಲಿ ಭಾಗವತಿಕೆ ಶ್ರೀ ಸತೀಶ್ ಶೆಟ್ಟಿ ಪಟ್ಲ,ಚೆಂಡೆ ಶ್ರೀ ದೇಲಂತ ಮಜಲು ಸುಬ್ರಹ್ಮಣ್ಯ ಭಟ್ , ವೆಂಕಟೇಶ್ ಶಾಸ್ತ್ರಿ,ಮಧೂರು ಲಕ್ಷ್ಮೀನಾರಾಯಣ,ಕೃಷ್ಣಪ್ರಸಾದ್ ಭಟ್, ಶೃತಿ ಜಗನ್ನಾಥ್ ಬೆಳ್ಳಾರೆ, ಚಕ್ರತಾಳ ರಾಜೇಶ್ ಕುತ್ತಾರ್.
ವರ್ಣಾಲಂಕಾರ ವೇಷ ಭೂಷಣ ಊರಿನಿಂದ ಆಗಮಿಸಿದ ಶ್ರೀ ಗಂಗಾಧರ್ ಶೆಟ್ಟಿಗಾರ್,ಬನಾರಿ ಚಂದ್ರಶೇಖರ ಗೌಡ
ರಂಗಲಂಕಾರ ದಿನೇಶ್ ಬಿಜೈ,ಸತೀಶ್ ಉಲ್ಲಾಳ್,ಸುಧಾಕರ್ ಪೂಜಾರಿ,ಶ್ರೀಕಾಂತ್ ಭಟ್ ಪುತ್ತೂರು, ಸಂದೀಪ್ ಬರ್ಕೆ.
ರಂಗಸ್ಥಳ ನಿರ್ಮಾಣ ಉಡ್ ಶೈನ್ ಕಾರ್ಪೆಂಟರಿ ದುಬಾಯಿ, ಧ್ವನಿ ಬೆಳಕು ಶ್ರೀ ಪ್ರಸಾದ್ ರೈ.
ಕಾರ್ಯಕ್ರಮ ನಿರೂಪಣೆ ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಶ್ರೀ ವಿಠಲ್ ಶೆಟ್ಟಿ
ಸಂಪೂರ್ಣ ಕಾರ್ಯಕ್ರಮದ ಸಂಯೊಜಕರು ಶ್ರೀ ದಿನೇಶ್ ಶೆಟ್ಟಿ ಮತ್ತು ಚಿದಾನಂದ ಪೂಜಾರಿ.
ಸಹೃದಯಿ ಪ್ರಾಯೋಜಕರು ಮತ್ತು ಅಭಿಮಾನಿ ಪ್ರೇಕ್ಷಕ ವರ್ಗ,ಕಾರ್ಯಕ್ರಮ ಯೋಜಕರ ತಂಡ, ತೆರೆಯಮರೆಯಲ್ಲಿರುವ ಹಲವಾರು ಪ್ರತಿಭಾನ್ವಿತರ ನಿಸ್ವಾರ್ಥ ಸೇವೆಯ ಫಲವಾಗಿ ದುಬಾಯಿ ಯಲ್ಲಿ ಯಕ್ಷಮಿತ್ರರು ಯು.ಎ.ಇ.ಅರ್ಪಿಸಿದ ಯಕ್ಷಗಾನ ಯಶಸ್ವಿ ಕಾರ್ಯಕ್ರಮಗಳ ಪಟ್ಟಿಗೆ ಸೇರ್ಪಡೆಯಾಯಿತು.