ದುಬೈ : ತನ್ನ ಮಾತಿಗೆ ಓಗೊಡದ ಪತ್ನಿಯನ್ನು ಬೆದರಿಸುವ ಸಲುವಾಗಿ ಅಕೆಯ ಖಾಸಗಿ ಭಾವಚಿತ್ರಗಳನ್ನು ಇಂಟರ್ ನೆಟ್ ಪ್ರಕಟಿಸಿ, ಅಕೆ ಕೆಲಸ ಮಾಡುತ್ತಿರುವ ಸಂಸ್ಥೆಯ ಸಹೋದ್ಯೋಗಿಗಳಿಗೂ ಕಳುಹಿಸಿದ ಅಸಭ್ಯ ಘಟನೆ ದುಬೈ ನ್ಯಾಯಲಯದಲ್ಲಿ ವರದಿಯಾಗಿದೆ.
ಈಜಿಪ್ತಿಯನ್ ಪತಿ ಈ ಅಸಾಂಸ್ಕೃತಿಕ ವರ್ತನೆ ತೋರಿದ್ದು, ಕೌಟುಂಬಿಕ ಮೂಲ ತತ್ತ್ವದ ಉಲ್ಲಂಘೆನೆ ಆಧಾರದಲ್ಲಿ ಮತ್ತು ಸಾರ್ವಜನಿಕ ಮಾನಹಾನಿಯ ಕುರಿತು ಇಲ್ಲಿನ ನ್ಯಾಯಾಲಯ ಮೊಕದ್ದಮೆ ದಾಖಲಿಸಿ ಆತನನ್ನು ವಿಚಾರಣೆಗೊಳಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಪತ್ನಿ , ಈತ ಕಳೆದ ವರ್ಷ ನನ್ನನ್ನು ವಿವಾಹವಾಗಿದ್ದ. ಕೆಲವು ಸಮಯದಲ್ಲೇ ಕ್ಷುಲ್ಲಕ ಕಾರಣಗಳನ್ನು ಎತ್ತಿ ಸಂಘರ್ಷವನ್ನು ಮಾಡುತ್ತಿದ್ದನ್ನಲ್ಲದೆ, ಹೊಸ ಕಾರೊಂದನ್ನು ಖರೀದಿಸಲು ಹಣಕ್ಕೆ ಪೀಡಿಸುತ್ತಿದ್ದ. ತಾನು ನಿರಾಕರಿಸಿದ ಹಿನ್ನೆಲೆಯಲ್ಲಿ ನನ್ನ ಕುಟುಂಬ ಸದಸ್ಯರಲ್ಲಿ, ಸಹೋದ್ಯೋಗಿಗಳ ಮುಂದೆ ಹಿಯ್ಯಾಳಿಸಿದ್ದಾನೆ. ಅಲ್ಲದೇ ನನ್ನ ಇ-ಮೈಲ್ ವಿಳಾಸವನ್ನು ಕದ್ದು, ನಮ್ಮೀರ್ವರ ಖಾಸಗಿ ಭಾವಚಿತ್ರವನ್ನು ಜಗಜ್ಜಾಹೀರುಗೊಳಿಸಿದ ಎಂದು ಖೇಧ ವ್ಯಕ್ತಪಡಿಸಿದ್ದಾಳೆ.
ತನ್ನ ನಗ್ನ ಚಿತ್ರಗಳನ್ನು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ ತನ್ನ ಸುಳ್ಳು ಹೆಸರು ಮರಂ(20) , ಈಕೆ ಗಂಡಸರಲ್ಲಿ ಆಸಕ್ತಿ ಹೊಂದಿದ್ದಾಳೆ ಎಂದು ಪ್ರಕಟಿಸಿದ್ದಾನೆ. ತನ್ನ ಸಹೋದ್ಯೋಗಿಗಳಿಗೆ ಭಾವಚಿತ್ರಗಳನ್ನು ಕಳುಹಿಸಿ ರಾತ್ರಿ ಕ್ಲಬ್ ಗಳಲ್ಲಿ ಈಕೆ ಕೆಲಸ ಮಾಡುತ್ತಿದ್ದಾಳೆ, ಈಕೆಯನ್ನು ಕೆಲಸದಿಂದ ತೆಗೆದು ಹಾಕಿ ಎಂಬುದಾಗಿ ಮೈಲ್ ನಲ್ಲಿ ಸಂದೇಶ ರವಾನಿಸಿದ್ದಾನೆ ಎಂದು ಪೋಲಿಸರಿಗೆ ತಿಳಿಸಿದ್ದಾಳೆ.
ಈ ಬಗ್ಗೆ ಪತ್ನಿಯ ತಂದೆಗೂ ದೂರವಾಣಿ ಮೂಲಕ ಬೆದರಿಕೆ ಹಾಕಿರುವ ಈ ಪತಿರಾಯ, ಇಸ್ಲಾಂ ಶರಿಯ್ಹ್ ಪದ್ದತಿ ಪ್ರಕಾರ ವಿಚ್ಚೇದನಕ್ಕೆ ಮುಂದಾದರೆ ಮಗಳ ಜೀವಕ್ಕೆ ತೊಂದರೆ ಕೊಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.