ಟಿವಿ, ಪ್ರಿಡ್ಜ್, ವಾಷಿಂಗ್ ಮಿಷನ್ ದರ ಹೆಚ್ಚಳ?
WD
ಸದ್ಯದಲ್ಲೇನಾದರೂ ಟಿವಿ, ಪ್ರಿಡ್ಜ್, ವಾಷಿಂಗ್ ಮಿಷನ್, ಏರ್ ಕಂಡೀಷನರ್ ಖರೀದಿಸುವ ಯೋಜನೆ ಇದೆಯಾ? ಹಾಗಾದರೆ ತಡಮಾಡದೆ ಖರೀದಿಸಿ. ಶೀಘ್ರದಲ್ಲಿಯೇ ಗೃಹ ಬಳಕೆಯ ಎಲೆಕ್ಟ್ರಾನಿಕ್ ಸರಕುಗಳ ಬೆಲೆ ಹೆಚ್ಚಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಡಾಲರ್ ಎದುರು ರೂಪಾಯಿಯ ವಿನಿಮಯ ಮೌಲ್ಯ ಕುಸಿದಿರುವುದು ಮತ್ತು ಉತ್ಪನ್ನಗಳ ತಯಾರಿಕೆಯ ಒಟ್ಟಾರೆ ವೆಚ್ಚವೂ ಹೆಚ್ಚಿರುವುದರಿಂದ ಕಂಪೆನಿಗಳು ಸರಕುಗಳ ಬೆಲೆಯನ್ನು ಏರಿಸಲು ಮುಂದಾಗಿವೆ. ಈ ಬಾರಿ ಶೇ 4ರಿಂದ ಶೇ 10ರಷ್ಟು ದರ ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.ಶೀಘ್ರದಲ್ಲಿಯೇ ರೆಫ್ರಿಜೇಟರ್ಗಳ ಬೆಲೆ ಹೆಚ್ಚಿಸಲಿದ್ದೇವೆ. ಆದರೆ, ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಎನ್ನುವುದು ಇನ್ನೂ ನಿಗದಿಯಾಗಿಲ್ಲ ಎಂದು ಸ್ಯಾಮ್ಸಂಗ್ ಹೋಮ್ ಅಪ್ಲೈಯನ್ಸಸ್ ಉಪಾಧ್ಯಕ್ಷ ಮಹೇಶ್ ಕೃಷ್ಣನ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ರೂಪಾಯಿ ಅಪಮೌಲ್ಯದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಆಮದು ದರ ಶೇ 30ರಿಂದ ಶೇ 70ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ಗರಿಷ್ಠ ಗುಣಮಟ್ಟದ ರೆಫ್ರಿಜರೇಟರ್, ಏರ್ ಕಂಡೀಷನರ್ ಮತ್ತು ವಾಷಿಂಗ್ ಮಿಷನ್ಗಳನ್ನು ಕಂಪೆನಿಗಳು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ವಿಮಾನ ಪ್ರಯಾಣ ದರ ಹೆಚ್ಚಿರುವುದು, ಪೆಟ್ರೋಲಿಯಂ ಉತ್ಪನ್ನಗಳು ತುಟ್ಟಿಯಾಗಿರುವುದು ಸಹ ಒಟ್ಟಾರೆ ವೆಚ್ಚ ಹೆಚ್ಚುವಂತೆ ಮಾಡಿದೆ ಎಂದಿದ್ದಾರೆ ಕೃಷ್ಣನ್.ಹೇಯರ್ ಎಲೆಕ್ಟ್ರಾನಿಕ್ಸ್ ದೇಶೀಯ ಮಾರುಕಟ್ಟೆಗೆ ಆರು ಬಾಗಿಲುಗಳುಳ್ಳ ಹೊಸ ರೆಫ್ರಿಜೇಟರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಇದೇ ವೇಳೆ ವಾಷಿಂಗ್ ಮಿಷನ್ ಮತ್ತು `ಎಲ್ಸಿಡಿ` ಟಿವಿಗಳ ಬೆಲೆಯನ್ನೂ ಶೀಘ್ರದಲ್ಲಿಯೇ ಶೇ 5ರಷ್ಟು ಹೆಚ್ಚಿಸುವುದಾಗಿ ಕಂಪೆನಿ ಅಧ್ಯಕ್ಷ ಎರಿಕ್ ಬ್ರಗಂಜ ಹೇಳಿದ್ದಾರೆ. ಗೊದ್ರೇಜ್, ಎಲ್.ಜಿ ಮತ್ತು ವರ್ಲ್ಪೂಲ್ ಕಂಪೆನಿಗಳೂ ಬೆಲೆ ಏರಿಕೆಯ ಲೆಕ್ಕಾಚಾರದಲ್ಲಿ ತೊಡಗಿವೆ. ಶೀಘ್ರದಲ್ಲಿಯೇ ಇವು ಪರಿಷ್ಕತ ದರ ಪ್ರಕಟಿಸುವ ಸಾಧ್ಯತೆಗಳಿವೆ.
Please fill in the form below with correct details
* mark fields are compulsory
|
|
Comments on this article:0
|
|
|
|