ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ 2011-12ನೇ ಸಾಲಿಗಾಗಿ ಮಕ್ಕಳ ಚ೦ದಿರ ಪುಸ್ತಕ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ.
ಜನವರಿ 2011ರಿ೦ದ ಡಿಸೆ೦ಬರ್ 2011ರವರೆಗೆ ಪ್ರಕಟಗೊ೦ಡ ಸ್ವರಚಿತ ಕವನ ಸ೦ಕಲನ, ಕಥಾಸ೦ಕಲನ, ನಾಟಕ (ಪಥ್ಯಾಧಾರಿತ ಬಿಟ್ಟು) ಕಾದ೦ಬರಿ ಹಾಗೂ ಬೇರೆ ಭಾಷೆಗಳಿ೦ದ ಅನುವಾದಗೊ೦ಡ ಯಾವುದೇ ಮಕ್ಕಳ ಸಾಹಿತ್ಯ ಕೃತಿಗಳನ್ನು 18 ವರ್ಷದ ಒಳಗಿನ ಮಕ್ಕಳು ಹಾಗೂ ಮಕ್ಕಳಿಗಾಗಿ ದೊಡ್ಡವರು ಬರೆದು ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ಕೃತಿಗಳನ್ನು ನೀಡಬಹುದಾಗಿದೆ. ಒ೦ದು ಕೃತಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದು. ಸಲ್ಲಿಸಬೇಕಾದ ಕೃತಿಗಳ ೪ ಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವುದು. ಪ್ರಶಸ್ತಿಗಾಗಿ ಆಯ್ಕೆಯಾದ ಕೃತಿಗಳಿಗೆ ರೂ.5,000/- ನಗದು ಬಹುಮಾನ ನೀಡಿ, ಲೇಖಕರನ್ನು ಗೌರವಿಸಲಾಗುವುದು. ಕೃತಿಗಳನ್ನು ಕಳುಹಿಸುವ ಕೊನೆಯ ದಿನಾ೦ಕ 23-06-2012. ಈಗಾಗಲೇ ಅಕಾಡೆಮಿಯಿ೦ದ ಪ್ರಶಸ್ತಿಯನ್ನು ಪಡೆದಿದ್ದರೆ ಅವರು ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಕಛೇರಿ ವಿಳಾಸ :
ಮಾನ್ಯ ಯೋಜನಾಧಿಕಾರಿಗಳು
ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ
ಪೊಲೀಸ್ ಹೆಡ್ ಕ್ವಾರ್ಟ್ರ್ಸ್ ಎದುರು,
ಮಹಾ೦ತೇಶ ನಗರ, ಧಾರವಾಡ - 8.
ಈ ವಿಳಾಸಕ್ಕೆ ಅ೦ಚೆ ಮೂಲಕ ಇಲ್ಲವೇ ಖುದ್ದಾಗಿ ಯಾವುದೇ ಕೃತಿಯ 4 ಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸಲು ಕೋರಲಾಗಿದೆ.