ಉಡುಪಿ ಬ್ರಹ್ಮರಥಕ್ಕೆ ಕಾಯಕಲ್ಪ
Udayavani.com
ಉಡುಪಿ : ಶ್ರೀಕೃಷ್ಣಮಠದಲ್ಲಿ ವರ್ಷದಲ್ಲಿ ಆರು ತಿಂಗಳು ಉತ್ಸವದಲ್ಲಿ ಪಾಲ್ಗೊಳ್ಳುವ ಬ್ರಹ್ಮರಥ ನಿರಂತರ ಸೇವೆಯಿಂದ ಸವಕಳಿ ಹೊಂದಿದ್ದು ಇದರ ದುರಸ್ತಿ ಕಾರ್ಯಕ್ಕೆ ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಕೈಹಾಕಿದ್ದಾರೆ.
ಇಡೀ ರಥ ನಿಂತಿರುವುದು ನಾಲ್ಕು ರಾಡುಗಳ ಮೇಲೆ. ಒಟ್ಟು 16 ಬೀಮುಗಳು ಇದೆ. ರಥದ ಒಂದು ಬದಿ ಜರಿದಿದೆ. ಇದರ ಯಾವ ಬೀಮು ತುಂಡಾಗಿದೆ ಎನ್ನುವುದನ್ನು ನೋಡಬೇಕಾಗಿದೆ. ಜೂ.20ರಂದು ಇದರ ಕೆಲಸ ಆರಂಭವಾಗಿದ್ದು ಜೂ.22ರಂದು ರಥಬೀದಿಗೆ ತಂದಿರಿಸಿ ಕೆಲಸ ಮುಂದುವರಿಸಿದ್ದಾರೆ. ಇದರ ಕೆಲಸ ಮಾಡಬೇಕಾದರೆ ವಿಶಾಲ ಜಾಗ ಬೇಕಾದ ಕಾರಣ ಸೋದೆ ಮಠದ ಇದಿರಿಗೆ ರಥವನ್ನು ತಂದಿರಿಸಿ ಮೇಲ್ಭಾಗದಲ್ಲಿ ಟಾರ್ಪಾಲು ಹಾಕಿ ಕೆಲಸ ಮಾಡುತ್ತಾರೆ.
ಮೇಲಿನ ಪ್ರಧಾನ ವೇದಿಕೆಯನ್ನು ತೆಗೆದು ಯಾವ ಬೀಮು ಹಾಳಾಗಿದೆ ಎನ್ನುವುದನ್ನು ನೋಡಬೇಕು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಇದು ತಿಳಿಯುತ್ತದೆ. ಅನಂತರ ಹಾಳಾದ ಬೀಮಿನ ಜಾಗದಲ್ಲಿ ಹೊಸತನ್ನು ಕೂಡಿಸಬೇಕು.
ಬೇರೆ ದೇವಸ್ಥಾನಗಳಲ್ಲಿ ವರ್ಷಕ್ಕೆ ಒಂದೇ ದಿನ ರಥವನ್ನು ಬಳಸಲಾಗುತ್ತದೆ. ಶ್ರೀಕೃಷ್ಣಮಠದಲ್ಲಿ ವರ್ಷದಲ್ಲಿ ಆರು ತಿಂಗಳು ರಥದ ಬಳಕೆಯಾಗುತ್ತದೆ. ಹೀಗಾಗಿ ಸವಕಳಿಯೂ ನಡೆಯುತ್ತಲೇ ಇರುತ್ತದೆ. ಈಗಷ್ಟೆ ಕೆಲಸ ಆರಂಭಿಸಿದ್ದೇವೆ. 2-3 ದಿನಗಳಲ್ಲಿ ಸರಿಯಾದ ಮಾಹಿತಿ ಸಿಗಲಿದೆ ಎನ್ನುತ್ತಾರೆ ಕೆಲಸದ ಜವಾಬ್ದಾರಿ ವಹಿಸಿರುವ ಪ್ರಸಿದ್ಧ ಶಿಲ್ಪಿ ಬಳ್ಕೂರು ಗೋಪಾಲಾಚಾರ್ಯರು. ಇವರು 2002ರಲ್ಲಿ ಶ್ರೀಪಲಿಮಾರು ಮಠದ ಪರ್ಯಾಯದಲ್ಲಿ ರಥದ ದುರಸ್ತಿ ಕೆಲಸ ಮಾಡಿಸಿದ್ದರು.
Please fill in the form below with correct details
* mark fields are compulsory
|
|
Comments on this article:0
|
|
|
|